Shishunala Sharif

7 March 1819 – 1889 / Shishuvinahala, Shiggaon taluk, Haveri district, Karnataka / India

ಏನಿದು ಪೇಳು ಆತ್ಮಗೆ ಪರಮಾತ್ಮಗೆ - Poem by Shishunala Sharif

ಏನಿದು ಪೇಳು ಆತ್ಮಗೆ ಪರಮಾತ್ಮಗೆ ||ಪ||

ನಿನ್ನ ನಿಜವನು ತಿಳಿಯದೆ ಭವದೊಳು
ಮುಳು ಮುಳುಗಿ ಶುಭ ಉಳಿಯದೆ ನೀ ||೧||

ಪರಮಸಾಗರ ಜೀವನ ಧರೆಗಾಳ್ದ ಈ ಘನ
ಅರಿಯದವಗೆ ಬರೆ ಉಸುರಿದರೇನಿದು
ಸುರ ಅಜ ಭವ ರುದ್ರಾದಿಗಳಿಗೆ ನೀ ||೨||

ಕುವಲಯರೂಪನಾತನು ಶಿವ ಪ್ರೀತನು
ಭವಸಾಗತರವನು ದಾಂಟಿ
ತವ ಶಿಶುನಾಳಧೀಶನ ಸೇವಕನಿಗೆ ನೀ ||೩||
259 Total read