Purandara Dasa

1484 – 1564 / Kshemapura, Shivamogga district, Karnataka / India

ಭಲೆ ಭಾಸ್ಕರ್ (1971) - ಏಳೇಳು ಶರಧಿಯು ಏಕವಾಗಿದೆ ಕಂಡ್ಯಾ - Poem by Purandara Dasa

ಘಂಟಸಾಲ: ಹೇಯ್ ಏಳೇಳು ಶರಧಿಯು ಏಕವಾಗಿದೆ ಕಂಡ್ಯಾ
ಹೇಗೆ ಬಂದೆಯೋ ಹೇಳು ಕೋತಿ
ಏಳೇಳು ಶರಧಿಯು ಏಕವಾಗಿದೆ ಕಂಡ್ಯಾ
ಹೇಗೆ ಬಂದೆಯೋ ಹೇಳು ಕೋತಿ

ಪಿ.ಬಿ.ಎಸ್: ಎಹ್ಹೆ ಏಳು ಶರಧಿಯೂ ಎನಗೇಳು ಕಾಲುವೆಯೂ
ಏಳು ಶರಧಿಯೂ ಎನಗೇಳು ಕಾಲುವೆಯೂ
ತೂಳಿ ಲಂಘಿಸಿ ಬಂದೆ ಭೂತ
ನಾ ತೂಳಿ ಲಂಘಿಸಿ ಬಂದೆ ಭೂತ

ಘಂಟಸಾಲ: ಯೇ ಲಂಕಾದ್ವಾರದೊಳೊಬ್ಬ ಲಂಕಾದ್ವಾರದೊಳೊಬ್ಬ ಲಂಕಿಣಿ ಇರುವಳು
ಹೇಗೆ ಬಿಟ್ಟಳು ಹೇಳು ಕೋತಿ
ನಿನ್ನಾ ಹೇಗೆ ಬಿಟ್ಟಳು ಹೇಳು ಕೋತಿ

ಪಿ.ಬಿ.ಎಸ್: ಲಂಕಿಣಿಯನು ಕೊಂದು
ಲಂಕಿಣಿಯನು ಕೊಂದು
ಶಂಕೆಯಿಲ್ಲದೆ ನಾನು
ಬಿಂಕದಲಿ ಬಂದೆ ಭೂತ
ನಾನು ಬಿಂಕದಲಿ ಬಂದೆ ಭೂತ

ಘಂಟಸಾಲ: ಅಹ್ಹಾ ಏಳೇಳು ಶರಧಿಯು ಏಕವಾಗಿದೆ ಕಂಡ್ಯಾ
ಹೇಗೆ ಬಂದೆಯೋ ಹೇಳು ಕೋತಿ

ಕೊಂಬೆಕೊಂಬೆಗೆ ಕೋಟಿಮಂದಿ ರಾಕ್ಷಸರಿರೆ ಎಹ್ಹೆ ಎಹ್ಹೆಹೆಹ್ಹೇ
ಕೊಂಬೆಕೊಂಬೆಗೆ ಕೋಟಿಮಂದಿ ರಾಕ್ಷಸರಿರೆ
ಹೇಗೆ ಬಿಟ್ಟರೋ ಹೇಳು ಕೋತೀ

ಪಿ.ಬಿ.ಎಸ್: ಕೊಂಬೆ ಕೊಂಬೆಗೆ ಕೋಟಿಮಂದಿ ರಾಕ್ಷಸರ ಕಚ್ಚಕ್ ಕಚ್ಚಕ್
ಕೊಂಬೆ ಕೊಂಬೆಗೆ ಕೋಟಿಮಂದಿ ರಾಕ್ಷಸರ
ಕೊಂದ್ ಹಾಕಿ ಬಂದೆನೊ ಪೆಡಂಭೂತ

ಘಂಟಸಾಲ: ಏಳೇಳು ಶರಧಿಯು ಏಕವಾಗಿದೆ ಕಂಡ್ಯಾ
ಹೇಗೆ ಬಂದೆಯೋ ಹೇಳು ಕೋತಿ

ಪಿ.ಬಿ.ಎಸ್: ಹೇಳಿದ್ನಲ್ಲೋ

ಘಂಟಸಾಲ: ಹೇ ದೂತನಾಗಿಹೆ ಎನ್ನ ಕೈಯೊಳು ಸಿಕ್ಕಿಹೆ

ಪಿ.ಬಿ.ಎಸ್: ಯಾರೋ

ಘಂಟಸಾಲ: ನೀನೇ

ದೂತನಾಗಿಹೆ ಎನ್ನ ಕೈಯೊಳು ಸಿಕ್ಕಿಹೆ
ಕೋಪ ಇನ್ನೇತಕ್ಕೊ ಕೋತಿ

ಪಿ.ಬಿ.ಎಸ್: ನಾ ತಾಳಿಕೊಂಡಿಹೆನೋ ಈ ಕ್ಷಣದಿ ಲಂಕೆ
ನಾ ತಾಳಿಕೊಂಡಿಹೆನೋ ಈ ಕ್ಷಣದಿ ಲಂಕೆ
ನಿರ್ಧೂಮವನು ಮಾಳ್ಪೆ ಭೂತ
ನಿರ್ಧೂಮವನು ಮಾಳ್ಪೆ ಭೂತ

ಘಂಟಸಾಲ: ಏಳೇಳು ಶರಧಿಯು ಏಕವಾಗಿದೆ ಕಂಡ್ಯಾ
ಹೇಗೆ ಬಂದೆಯೋ ಹೇಳು ಕೋತಿ

ಪಿ.ಬಿ.ಎಸ್: ಎಷ್ಟ್ ಸಲ ಹೇಳೋದೋ

ಘಂಟಸಾಲ: ಹ್ಹಾ ನಿಮ್ಮಂಥ ದಾಸರು ನಿಮ್ಮರಸನ ಬಳಿ
ನಿಮ್ಮಂಥ ದಾಸರು ನಿಮ್ಮ ಅರಸನ ಬಳಿ

ಎಷ್ಟು ಮಂದಿ ಇದ್ದಾರೋ ಕೋತಿ

ಪಿ.ಬಿ.ಎಸ್: ನನ್ನಂಥ ದಾಸರು ನಿನ್ನಂಥ ಹೇಡಿಗಳು ನನ್ನಂಥ ದಾಸರು ನಿನ್ನಂಥ ಹೇಡಿಗಳು ನಿನ್ನಂಥ ಹೇಡಿಗಳು ನಿನ್ನಂಥ ಹೇಡಿಗಳು ಹೇಡಿ ಹೇಡಿ ಚೀ ಹೇಡಿ
ಕೋಟ್ಯಾನುಕೋಟಿಯೊ ಭೂತ

ಏಳೇಳು ಶರಧಿಯು ಏಕವಾಗಿದೆ ಕಂಡ್ಯಾ
ಹೇಗೆ ಬಂದೆಯೋ ಹೇಳು ಕೋ..ಓ

ಘಂಟಸಾಲ: ಶ್ರೀರಾಮಚಂದ್ರನು ನಿನ್ನರಸನಾದರೆ
ಆತ ಮುನ್ನಾರ್ ಹೇಳೋ ಕೋತಿ

ಪಿ.ಬಿ.ಎಸ್: ಹಿರಣ್ಯಕನನು ಸೀಳಿ ಪ್ರಹ್ಲಾದಗೊಲಿದ
ಹಿರಣ್ಯಕನನು ಸೀಳಿ ಪ್ರಹ್ಲಾದಗೊಲಿದ ಶ್ರೀ
ಪುರಂದರವಿಠಲನು ಭೂತ
ರಾವ್ಣಾ ಹಿರಣ್ಯಕನನು ಸೀಳಿ ಸೀ ಸೀ ಸೀ ಸೀ

ಘಂಟಸಾಲ: ಸೀತೆ ಸೀತೆ ಎಲ್ಲಿ ಎಲ್ಲಿ

ಪಿ.ಬಿ.ಎಸ್: ಅದೋ ಅಲ್ಲಿ
107 Total read